Sunday, March 7, 2010
nuggehaLLige bhETi
ಬಹಳ ದಿನಗಳ ನಂತರ ಬಹುದಿನದ ಆಸೆ ಈಡೇರಿತು. ನುಗ್ಗೆಹಳ್ಳಿಯ ಹತ್ತಿರ ಎಷ್ಟೋ ಬಾರಿ ಹೋಗಿದ್ದರು ಅಲ್ಲಿ ಹೋಗಲಾಗಿರಲಿಲ್ಲ. ಎರಡು ಪುರಾತನ ದೇವಾಲಯಗಳು ಒಂದು ಶಿವನಿಗೆ ಇನ್ನೊಂದು ವಿಷ್ಣುವಿಗೆ. ಸದಾಶಿವ ಸ್ವಾಮಿ ಯದು ಸ್ವಲ್ಪ ಹೊಸದು ಲಕ್ಷ್ಮೀನರಸಿಂಹ ಸ್ವಾಮಿ ಯದು ಕೆಲವೇ ವರ್ಷ ಹಳೆಯದು. ಹೊಯ್ಸಳರ ಶಿಲ್ಪಕಲೆ ಎಷ್ಟು ನೋಡಿದರು ಸಾಲದು.ಹಾಸನ ಜಿಲ್ಲೆಯ ಸುಮಾರು ೩೦ ರಿಂದ ೪೦ ದೇವಾಲಯಗಳನ್ನು ನೋಡಿದ್ದೇನೆ. ಎಲ್ಲ ಕಡೆ ಒಂದೇ ತೆರನಾದ ರಚನೆಯಾದರೂ ಪ್ರತಿಯೊಂದು ಭಿನ್ನ. ಏನೋ ಹೊಸದು. ಮತ್ತೆ ಮತ್ತೆ ನೋಡಬೇಕು ಅನ್ನಿಸದೆ ಇರದು.ಈ ಶಿಲ್ಪಿ ಕಲೆಯ ರಕ್ಷಣೆ ಸಾಲದು. ಆಗಾಗ್ಗೆ ರಿಪೇರಿಯ ಅವಶ್ಯಕತೆ ಇದೆ. ದೇವಾಲಯಗಳ ಆದಾಯ ಇದಕ್ಕೇಕೆ ಖರ್ಚು ಮಾಡಬಾರದು. ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಸ್ಥಳ ನುಗ್ಗೆ ಹಳ್ಳಿ. ಹತ್ತಿರದಲ್ಲೇ ಬಾಗೂರು ಇದೆ.ಆದರೇ ಅಲ್ಲಿರುವ ದೇವಾಲಯ ಪುರಾತನವಾದರು ಕಲಾ ಪ್ರೌಢಿಮೆ ಏನಿಲ್ಲ. ಒಮ್ಮೆ ನೋಡಿ ಬನ್ನಿ.
Subscribe to:
Post Comments (Atom)
1 comment:
missed out on photographing Hoysala architecture this time
Post a Comment