ಅಲ್ಲಿಂದ ಗದಗು.ಡಾ ಇನಾಮ್ದಾರ್ ಅಣ್ಣ ನಮಗಾಗಿ ವಿಶ್ವ ಹೋಟೆಲ್ ಬಳಿ ಇದ್ದರು. ಅವರೊಂದಿಗೆ ಗದಗಿನ ತ್ರಿಕೂಟೇಶ್ವರ, ಮತ್ತೆ ವೀರನಾರಾಯಣ ನಿಗೆ ಭೇಟಿ. ನಂತರ್ ಗದಗಿನಿಂದ ದಂಬಳ ೨೪ ಕಿ ಮೀ ಅಲ್ಲಿ ವಿನೂತನ ಶೈಲಿಯ ೨೪ ಮುಖಗಳ ದೊಡ್ಡ ಬಸಪ್ಪ ದೇವಾಲಯ ಕಲ್ಯಾಣದ ಚಾಲುಕ್ಯರ ಕೊಡುಗೆ. ಪರಿಸರ ಚನ್ನಾಗಿದೆ. ಹುಲ್ಲು ಹಾಸು ಸುತ್ತಲು ಕೊಳಕು ಇಲ್ಲ. ಆದರೆ ಗದಗಿಗೆ ಅಷ್ಟು ಹತ್ತಿರ ಇದ್ದರು ಪ್ರಚಾರ ಸಾಲದು. ಅಲ್ಲಿಂದ ಸ್ವಲ್ಪ ಕಚ್ಚ ರಸ್ತೆಯಲ್ಲಿ ಕೊಪ್ಪಳ ಜಿಲ್ಲೆಯ ಇಟಗಿಗೆ. ದೇವಾಲಯಗಳ ಚಕ್ರವರ್ತಿ ಎಂದೆ ಚಾಲುಕ್ಯರ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಮಹದೇವ ದೇವಾಲಯ ದರ್ಶನ.೧೨ ಗಂಟೆ ಉರಿ ಬಿಸಿಲು ಆದರೆ ನಮಗಾಗಿ ಅಂದು ಮೋಡ ಕವಿದ ವಾತಾವರಣ. ಪುನರ್ನಿಮಾಣ ನಡೆಯುತ್ತಿತ್ತು.ಮುಖಮಂಡಪ ದ ತಂಪಿನಲ್ಲಿ ಊರಿನ ಯಾವುದೋ ವ್ಯಾಜ್ಯ ತೀರ್ಮಾನ ವಾಗುತ್ತಿತ್ತು. ಪಕ್ಕದಾಲೇ ದೊಡ್ಡದಾದ ಹೊಸದಾಗಿ ಪುನರ್ನಿಮಾಣ ಮಾಡಿದ ಕಲ್ಯಾಣಿ. ಇನ್ನೊಂದೆರಡು ವರ್ಷಗಳಲ್ಲಿ ಅದ್ಭುತ ಪ್ರವಾಸಿ ತಾಣ ಸ್ಪಷ್ಟ.
ಅಲ್ಲಿಂದ ಕೇವಲ ೭ ಕಿ ಮೀ ದೂರದ ಕುಕ್ಕನೂರಿಗೆ. ಅಲ್ಲಿ ೯-೧೦ ನೆ ಶತಮಾನದ, ಅಮೋಘವರ್ಷನ ಕಾಲದಲ್ಲಿ ನಿರ್ಮಾಣವಾದ ನವಲಿಂಗ ದೇವಾಲಯ ನಮ್ಮವರ ಇತಿಹಾಸ ಪ್ರಜ್ನೆ ಗೆ ಸಾಕ್ಷಿ ಯಾಗಿ ನಿಂತಿದೆ. ಹಾಗೆ ಬಿಟ್ಟರೆ ಕೆಲವೆ ವರ್ಷಗಳಲ್ಲಿ ನಾಶ ಖಂಡಿತ.
ಅಲ್ಲಿಂದ ಗದಗಿಗೆ ಹಿಂದಕ್ಕೆ. ದಾರಿಯಲ್ಲಿ ಪ್ರಸಿದ್ದ ಲಕ್ಕುಂಡಿ ದರ್ಶನ. ದೇಗುಲಗಳ ತವರು ಲಕ್ಕುಂಡಿ. ೧೦೧ ಇದ್ದವು ಈಗ ಬೆರಳೆಣಿಕೆಯಷ್ಟು. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಬ್ರಹ್ಮ ಜಿನಾಲಯ,ಮುಸುಕಿನ ಬಾವಿ. ಲಕ್ಕುಂಡಿ ದಾನ ಚಿಂತಾಮಣೀ ಅತ್ತಿಮಬ್ಬೆಯ ತವರು.
ನಂತರ ಗದಗು. ಅಲ್ಲಿ ಇನಾಮದಾರ ಅವರ ಮನೆಯಲ್ಲಿ ವಿಶ್ರಾಂತಿ, ಊಟ .ಔತಣ ಮತ್ತೆ ಶ್ರೀಮತಿಗೆ ಮಗಳೆಂದು ಬಹುಮಾನ. ಸಾರ್ಥಕ ಪ್ರಯಾಣ.
ಮತ್ತೆ ಹುಬ್ಬಳ್ಳಿಗೆ ಪಯಣ. ದಾರಿಯಲ್ಲಿ ಕೋಳಿವಾಡ ಕ್ಕೆ ಭೇಟಿ ಕೃಪೆ ನಮ್ಮ ಡ್ರೈವರ್ ಶಿವಾನಂದ. ಅಲ್ಲಿಯೆ ಓದಿದ್ದಂತೆ. ಸೋದರಳೀಯನಿಗೆ ಫೋನ್ ಮಾಡಿ ನಮ್ಮ ಭೇಟಿ ನಿರ್ಣಯ ಮಾಡಿದ. ಕವಿ ಕುಮಾರವ್ಯಾಸನ ೪೦ನೆ ತಲೆ ತ್ರ್ಯಂಬಕೇಶ್ವರ್ ಪಾಟಿಲರ ಭೇಟಿ. ಕವಿಯ ಮೂಲ ಪ್ರತಿ ತಾಳೆ ಗರಿಗಳ ದರ್ಶನ. ಸೌಭಾಗ್ಯ ನಮ್ಮದು.
ವಾಪಸ್ ಹುಬ್ಬಳ್ಳಿಗೆ ರಾತ್ರಿ ೮ ಗಂಟೆಗೆ.ರಾತ್ರಿ ರವಿ ಮತ್ತೆ ಬೇಲೂರ್ ಜೊತೆ ಊಟ ಸ್ವಾತಿಯಲ್ಲಿ.
ಮಾರನೆ ದಿನ ಸನ್ಮಾನ ಕಾರ್ಯಕ್ರಮ ಮತ್ತು ಮೊಡವೆಗಳ ಮೇಲೆ ಸೈಂಟಿಫಿಕ್ ಕಾರ್ಯಕ್ರಮ ಹೋಟಲ್ ಕ್ಲಾರ್ಕ್ಸ್ ಇನ್ ನಲ್ಲಿ. ಚಿಕ್ಕ, ಚೊಕ್ಕ ಹೋಟಲ್.