Tuesday, May 26, 2009

ಒಂದು ಅಭ್ಯಾಸ ಕನ್ನಡ ಪ್ರಿಯರಿಗೆ.

ಕನ್ನಡವನ್ನು ಓದಿ ಅರ್ಥೈಸ ಬಲ್ಲಿರಾ?.

ಸರಿಮಿಂಡಿಯೋರ್ವಳು ಓಪನೊಡಗೂಡಿ ಒಲ್ಲಣಿಗೆಯುಟ್ಟು ನಾಗಂದಿಗೆಯ ಮೇಲಿದ್ದ ಹಂಜಕ್ಕಿಯನ್ನು ತಿನ್ನುತ್ತಿದ್ದಳು. ನೆಗಣ್ಣಿ ಕೊಟ್ಟಿದ್ದ ಅಗಲನ್ನು ಬಳಸಿ ಓದನವನ್ನು ಕಲಸುತ್ತಿದ್ದಳು. ಕೊರಳಲ್ಲಿ ಎಕ್ಕಾವಳಿಯೊಂದು ಇತ್ತು. ಆಲಿಯೋರ್ವಳು ಕೊಟ್ಟಿದ್ದ ಎಡ್ಡವದ ಹಿಮ್ಮಣಿಯು ಪಕ್ಕದಲ್ಲಿತ್ತು.
ಸರಿಮಿಂಡಿಯು ಒಳ್ಳೆಯ ಪರಮೆಯಂತೆ ಕಾಣುತ್ತಿದ್ದಳು. ಅವಳು ಉಟ್ಟಿದ್ದ ಪಟವಾಸ ಒಲ್ಲಣಿಗೆಯಿಂದ ಎದ್ದು ಕಾಣುತ್ತಿತ್ತು. ಬವರಿಗಳೆಲ್ಲ ಹೊಂಪುಳಿಗೊಂಡು ಓಪನ ಹಾಳತ ತಪ್ಪುತ್ತಿತ್ತು.
ಅವಳೊಳ್ಳೆ ಅಚ್ಚರಸಿಯ ಅಣುಗಿಯಂತೆ ಮಕರಿಕೆಯಿಂದಲೂ, ಗುಳದಾಳಿಯಿಂದಲೂ ಶೋಭಿಸುತ್ತಿದ್ದಳು. ಚಷಕದಲ್ಲಿ ಅಳೆಯನ್ನು ಕುಡಿಯುತ್ತ ಬಿರ್ದಿಸುತ್ತಿದ್ದಳು. ಶಿವದಾನ ಕುಡಿದ ನಂತರ ಕಾಳಂಜಿಯಲ್ಲಿ ಗಂಡೂಷಿಸಿ ಜಡದಲ್ಲಿ ಅಗಲನ್ನು ತೊಳೆದಿಟ್ಟಳು.

Saturday, May 16, 2009

ಒಂದು ಪ್ರಶ್ನೋತ್ತರ,

ತೆಗೆದಿರಿಸಿ ಸತ್ಯಸಂಧತೆಯ ಬುರ್ಕ.
ಮಾಡುವುದ ಕಲಿ ನೀ ಸರ್ಕಾರಿ ವರ್ಕ
ಆಗ ತಿಳಿಯುವ ನಿನದರ್ ಫರ್ಕ.

ತಿಳಿಯಲೋಸುಗ ಬರಿ ಫರ್ಕ
ತೆಗೆಯಲಾರೆ ನನ್ನಾತ್ಮ ಸಾಕ್ಷಿಯ ಕಾರ್ಕ
ಚಿಂತಿಲ್ಲ ನಿನ್ನಳೆತೆಯಲಿ ನಾನಾದರು mUrkha

ಹೌದು ನೀ ಬಲು ಆನೆಸ್ಟು
ಮಾಡಿರುವೆ ಕೆಲಸ ಬಲು ಅರ್ನೆಸ್ಟು
ಅದಕ್ಕೆ ನಿನಗಿಲ್ಲ ಒಂದು ನೆಸ್ಟು

ಇಲ್ಲದಿರೆ ಏನಂತೆ ನನಗೆ ನೆಸ್ಟು
ಎಲ್ಲದರಲು ನನ್ನದೇ ವರ್ಕು ಬೆಸ್ಟು
ಕಾದಿರಿಸಿಹೆ ನನಗಾಗಿ ಸ್ವರ್ಗದಲಿ ಒಂದು ಪೋಸ್ಟು

ಸ್ವರ್ಗದಲಿ ಇರಬಹುದು ನಿನ್ನ ಫ್ಯೂಚರ್ ಪೋಸ್ಟು
ನಮ್ಮ ಪಾಲಿಗೆ ನೀನು ಪಾಸ್ಟ್ ಉ
ಬದುಕುವುದ ಕಲಿ ಇಲ್ಲಿ ಪ್ರೆಸೆಂಟು

ತಿಳಿ ನೀನು ನಾನಿಲ್ಲಿ ಬಂದಿರುವ ಗೆಸ್ಟು
ನೀನೇಕೆ ಆಗಿರುವೆ ನನ್ನೊಡನೆ ಡಿಸ್ಗಸ್ಟು
ಬದುಕುವೆನು ನನ್ನ ಬಸ್ಟು ಇರುವರೆಗೆ ರೋಬಸ್ಟು
















Tuesday, May 12, 2009

ವೈದ್ಯ ಮತ್ತು ವಿಪರ್ಯಾಸ.

ಕೆಟ್ಟದ್ದನ್ನು ನೋಡಬೇಡ.

ನನಗಲ್ಲ ಈ ಮಾತು, ಬೆಳಗಿನಿಂದ ಸಂಜೆಯವರೆಗೂ ಬರುವ ರೋಗಿಗಳ ಮೈ ತುಂಬ ಬರೇ ಕೆಟ್ಟದ್ದನ್ನೇ ಹುಡುಕುವ
ಅಂದ ಚೆಂದದ ಹೊಂಬಣ್ಣದ ತೊಗಲಿನ ಮೇಲೆ ಬರೀ ಕಲೆಗಳನ್ನೇ ಹುಡುಕುವ ನಾನು ಕೆಟ್ಟದ್ದನ್ನು ನೋಡಬೇಡ ಅಂದರೆ.

ಕೆಟ್ಟದ್ದನ್ನು ಕೇಳಬೇಡ.

ಸ್ಟೆಥಸ್ಕೋಪ್ ಇಟ್ಟು ಹೊಟ್ಟೆಯಲ್ಲಿ ಗುಡುಗುಡುವ ಶಬ್ದವನ್ನುಹೃದಯದ ಮಿಡಿತದ ತಪ್ಪಿದ ತಾಳದ ಗತಿಯನ್ನೆ ಕೇಳುವಶ್ವಾಸದ ಕೊಳಲಿನ ನಾದದ ಬದಲು ಗುರುಗುರು ಶಬ್ದವನ್ನೇ ಹುಡುಕಿ ಕೇಳುವ ನಾನು ಕೆಟ್ಟದ್ದನ್ನು ಕೇಳಬೇಡ ಎಂದರೆ

ಕೆಟ್ಟದ್ದನ್ನು ಆಡಬೇಡ

ಆಡಲು ಆಸ್ಪದವಾದರು ಎಲ್ಲಿ, ಒಳಗಿನ ಖಾಯಿಲೆಯ ಮುಚ್ಚಿಟ್ಟು ಸುಳ್ಳುಗಳ ಸರಮಾಲೆ ಕಟ್ಟಿ ನಂಬಿಕೆಯ ಆಸೆಗಳ ಸೃಷ್ಟಿಸಿ ಬೇಕೆಂದರೂ ಆಡಲು ಅವಕಾಶವಿಲ್ಲದೆ ಬರೀ ಹಿಪೊಕ್ರಸಿಯಲ್ಲೇ ಜೀವಿಸುವ ನಾನು ಕೆಟ್ಟದ್ದನ್ನು ಆಡಬೇಡ ಎಂದರೆ.

Sunday, May 10, 2009

ಬರ.

ಬರ ನಮ್ಮೂರಿಗೆ ಬಂದಿತು
ಹರಿಯುವ ತೊರೆ ಬತ್ತಿತು
ಕರೆಯುವ ತುರುಕರು ಸತ್ತಿತು
ಆದರೇನು ಹಿರಿದು ತಿನ್ನುವ ಜನ ಹೆಚ್ಚಿತು

ಬರ ನಮ್ಮೂರಿಗೆ ಬಂದಿತು
ನೀರನರಸಿ ಕೆರೆ ಸವೆಯಿತು
maravONagi ಬರಿದಾಯಿತು
ಆದರೇನು ಹಿರಿದು ತಿನ್ನುವ ಜನ ಹೆಚ್ಚಿತು

ಬರ ನಮ್ಮೂರಿಗೆ ಬಂದಿತು
oora ಕೆರೆ ಬರಿದಾಯಿತು
neereyara ಕಣ್ಣು toyditu
ಆದರೇನು ಹಿರಿದು ತಿನ್ನುವ ಜನ ಹೆಚ್ಚಿತು

ಬರ ನಮ್ಮೂರಿಗೆ ಬಂದಿತು
badukuvaasege ಬರ ಬಂದಿತು
badukidavaraasthege ಬರ ಬಂದಿತು
ಆದರೇನು ಹಿರಿದು ತಿನ್ನುವ janakke ಬರಲಿಲ್ಲ ಬರ.






Wednesday, May 6, 2009

Is life a game?

Life is an unpredictable game
sometimes you wallow in fame
other times you are called a name
most of the time is simply a game.

every one no doubt is a player
only a few get in to the foyer
most oothers watch from the wing
and imagine themselves in the ring.

It is like a game of cricket
only you do not like the wicket
expensive is the ring side thicket
you have to buy your own ticket.

you bat, you always growl
you bowl, you only howl
at times in the field all day
only thing you do is pray

you bat the ball takes vicious turns
you bowl, fours and sixes are the runs
you bat every Tom,Dick and Harry takes your catch
on the field, balls you simply donot reach.

you are tired when the stumps are drawn
your name shows no wicket,catch or run
it may look as a tale forlorn
for most stumps are drawn just when born