Tuesday, May 12, 2009

ವೈದ್ಯ ಮತ್ತು ವಿಪರ್ಯಾಸ.

ಕೆಟ್ಟದ್ದನ್ನು ನೋಡಬೇಡ.

ನನಗಲ್ಲ ಈ ಮಾತು, ಬೆಳಗಿನಿಂದ ಸಂಜೆಯವರೆಗೂ ಬರುವ ರೋಗಿಗಳ ಮೈ ತುಂಬ ಬರೇ ಕೆಟ್ಟದ್ದನ್ನೇ ಹುಡುಕುವ
ಅಂದ ಚೆಂದದ ಹೊಂಬಣ್ಣದ ತೊಗಲಿನ ಮೇಲೆ ಬರೀ ಕಲೆಗಳನ್ನೇ ಹುಡುಕುವ ನಾನು ಕೆಟ್ಟದ್ದನ್ನು ನೋಡಬೇಡ ಅಂದರೆ.

ಕೆಟ್ಟದ್ದನ್ನು ಕೇಳಬೇಡ.

ಸ್ಟೆಥಸ್ಕೋಪ್ ಇಟ್ಟು ಹೊಟ್ಟೆಯಲ್ಲಿ ಗುಡುಗುಡುವ ಶಬ್ದವನ್ನುಹೃದಯದ ಮಿಡಿತದ ತಪ್ಪಿದ ತಾಳದ ಗತಿಯನ್ನೆ ಕೇಳುವಶ್ವಾಸದ ಕೊಳಲಿನ ನಾದದ ಬದಲು ಗುರುಗುರು ಶಬ್ದವನ್ನೇ ಹುಡುಕಿ ಕೇಳುವ ನಾನು ಕೆಟ್ಟದ್ದನ್ನು ಕೇಳಬೇಡ ಎಂದರೆ

ಕೆಟ್ಟದ್ದನ್ನು ಆಡಬೇಡ

ಆಡಲು ಆಸ್ಪದವಾದರು ಎಲ್ಲಿ, ಒಳಗಿನ ಖಾಯಿಲೆಯ ಮುಚ್ಚಿಟ್ಟು ಸುಳ್ಳುಗಳ ಸರಮಾಲೆ ಕಟ್ಟಿ ನಂಬಿಕೆಯ ಆಸೆಗಳ ಸೃಷ್ಟಿಸಿ ಬೇಕೆಂದರೂ ಆಡಲು ಅವಕಾಶವಿಲ್ಲದೆ ಬರೀ ಹಿಪೊಕ್ರಸಿಯಲ್ಲೇ ಜೀವಿಸುವ ನಾನು ಕೆಟ್ಟದ್ದನ್ನು ಆಡಬೇಡ ಎಂದರೆ.

No comments: