Showing posts with label ಸತ್ಯಸಂಧತೆ. Show all posts
Showing posts with label ಸತ್ಯಸಂಧತೆ. Show all posts

Saturday, May 16, 2009

ಒಂದು ಪ್ರಶ್ನೋತ್ತರ,

ತೆಗೆದಿರಿಸಿ ಸತ್ಯಸಂಧತೆಯ ಬುರ್ಕ.
ಮಾಡುವುದ ಕಲಿ ನೀ ಸರ್ಕಾರಿ ವರ್ಕ
ಆಗ ತಿಳಿಯುವ ನಿನದರ್ ಫರ್ಕ.

ತಿಳಿಯಲೋಸುಗ ಬರಿ ಫರ್ಕ
ತೆಗೆಯಲಾರೆ ನನ್ನಾತ್ಮ ಸಾಕ್ಷಿಯ ಕಾರ್ಕ
ಚಿಂತಿಲ್ಲ ನಿನ್ನಳೆತೆಯಲಿ ನಾನಾದರು mUrkha

ಹೌದು ನೀ ಬಲು ಆನೆಸ್ಟು
ಮಾಡಿರುವೆ ಕೆಲಸ ಬಲು ಅರ್ನೆಸ್ಟು
ಅದಕ್ಕೆ ನಿನಗಿಲ್ಲ ಒಂದು ನೆಸ್ಟು

ಇಲ್ಲದಿರೆ ಏನಂತೆ ನನಗೆ ನೆಸ್ಟು
ಎಲ್ಲದರಲು ನನ್ನದೇ ವರ್ಕು ಬೆಸ್ಟು
ಕಾದಿರಿಸಿಹೆ ನನಗಾಗಿ ಸ್ವರ್ಗದಲಿ ಒಂದು ಪೋಸ್ಟು

ಸ್ವರ್ಗದಲಿ ಇರಬಹುದು ನಿನ್ನ ಫ್ಯೂಚರ್ ಪೋಸ್ಟು
ನಮ್ಮ ಪಾಲಿಗೆ ನೀನು ಪಾಸ್ಟ್ ಉ
ಬದುಕುವುದ ಕಲಿ ಇಲ್ಲಿ ಪ್ರೆಸೆಂಟು

ತಿಳಿ ನೀನು ನಾನಿಲ್ಲಿ ಬಂದಿರುವ ಗೆಸ್ಟು
ನೀನೇಕೆ ಆಗಿರುವೆ ನನ್ನೊಡನೆ ಡಿಸ್ಗಸ್ಟು
ಬದುಕುವೆನು ನನ್ನ ಬಸ್ಟು ಇರುವರೆಗೆ ರೋಬಸ್ಟು