Friday, December 11, 2009
doddaballapura.
ಬಹಳ ದಿನಗಳ ನಂತರ ಮತ್ತೆ ಒಂದು ಚಿಕ್ಕ ಪ್ರವಾಸ ದೊರಕಿತು. ಮಿತ್ರರಾದ ಗಣೇಶ ರಾವ್ ಜೊತೆ doDDabaLLaapurakke ಹೋಗಿದ್ದೆ. ಒಂದೆರಡು ಗಂಟೆ ಸಮಯವಿತ್ತು. ವಿಪರೀತ ಸೆಖೆ ಇತ್ತು. ಹಾಗೆ ಸುತ್ತಾಡಿ ಬರಲು ಹೊರಟೆ, ಎಲ್ಲಾ ಚಿಕ್ಕ ಚಿಕ್ಕ ಗಲ್ಲಿಗಳಂತ ರಸ್ತೆಗಳು ಎಲ್ಲ ಸಿಮೆಂಟ್ ರಸ್ತೆಗಳು. ಎರಡು ಬದಿ ತೆರೆದ ಚರಂಡಿಗಳು. ಸ್ವಲ್ಪ ಜಾಸ್ತಿಯೇ ಅನ್ನುವಂತಹ ಕೊಳಚೆ. ಒಂದೇ ಸಮ ಬರುವ ಮಗ್ಗಗಳ ಶಬ್ದ. ರಾತ್ರಿಯೆಲ್ಲ ಹೀಗೆ ಇದ್ದರೆ ಇರುವುದಾದರೂ ಹೇಗೆ ಎಂಬ ಅನುಮಾನ ಕಾಡಿತು. ಅಲ್ಲಿಯೇ ಹತ್ತಿರ ಇದ್ದ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹೋದೆ. ಅಷ್ಟೇನೂ ಪುರಾತನವಲ್ಲದ ದೇವಾಲಯ. ಸುತ್ತ ಜಾಲಂದ್ರಗಳು. ಗೋಡೆಯ ಮೇಲೆ ಅಲ್ಲೊಂದು ಇಲ್ಲೊಂದು ಉಬ್ಬುಶಿಲ್ಪಗಳು. ಮೇಲೆ ದಶಾವತಾರದ ಶಿಲ್ಪಗಳು. ಅಲ್ಲೇ ಪಕ್ಕದಲ್ಲಿ ಶಂಕರ ಮಠ ಇದೆ. ಗಲ್ಲಿಯೊಂದರಲ್ಲಿ ರಾಯರ ಮಠ ಕೂಡ ಇದೆ. ಊರ ಹೊರಗೆ ಒಂದು ಹಾಳು ಬಿದ್ದ ಚಿಕ್ಕ ದೇವಾಲಯ ಇದೆ. ಬೀಗ ಹಾಕಿದ್ದರಿಂದ ಒಳಗೆ ಹೋಗಲಿಲ್ಲ.
ಆದರೇ ದೊಡ್ಡ ಬಳ್ಳಾಪುರ ಸ್ವಲ್ಪ ನಿರಾಸೆಯೇ ಆಯಿತು.
Tuesday, October 13, 2009
ಬೂದಿಹಾಳು ಪಾಳೆಯಪಟ್ಟಿನ ನೆನಪು.
ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಕಳೆದ ಭಾನುವಾರ ಬೂದಿಹಾಳಿಗೆ ಭೇಟಿ ನೀಡಿದೆ. ೧೫ ನೆ ಶತಮಾನದಲ್ಲಿ ಆಳಿದ ಕಾಚನಾಯಕನ ವಂಶದ ಸಿರುಮನಾಯಕನ ಪಾಳೆಯ ಅದಾಗಿತ್ತು. ಆ ಪಾಳೆಯಪಟ್ಟನ್ನು ವಿಜಯನಗರದ ನಂತರದ ಪ್ರಬಲ ರಾಜನೆಂದು ಗುರುತಿಸಿದ್ದರು. ಸಾಳುವ ನರಸಿಂಹನೊಡನೆ ಹೋರಾಡಿ ವೀರ ಮರಣ ಹೊಂದಿದ ಸಿರುಮನಾಯಕನ ಬಗ್ಗೆ ೩ ಸಾಂಗತ್ಯ ಕಾವ್ಯಗಳಿರುವುದೇ ಸಾಕ್ಷಿ. ಹೆಸರೇ ಹೇಳುವಂತೆ ಈಗ ಅದು ಬೂದಿಹಾಳು.ಈಗಿನ ಹೆಸರು ಶ್ರೀರಾಮಪುರ. ಹೊಸದುರಗ ತಾಲೂಕು. ವೀರಭದ್ರನ ಗುಡಿ ಒಂದಿದೆ. ಹತ್ತಿರ ಇರುವ ಹೆಗ್ಗೆರೆ ಗೆ ಹೋಗಲಿಲ್ಲ. ಇದು ಜೈನರ ಯಾತ್ರಾಸ್ಥಳ.ಅಲ್ಲಿಂದ ೩ ಕಿ ಮೀ ದೂರದ ಗವಿರಂಗನಾಥ ನ ಬೆಟ್ಟ ನೋಡಿದ್ದಾಯಿತು.ಅಲ್ಲಿಂದ ನಮ್ಮೂರು ಮೇಟಿಕುರ್ಕೆಗೆ ಭೇಟಿ ನೀಡಿ ಅರಸೀಕೆರೆ ಯಲ್ಲಿ ಹೊಯ್ಸಳರ ಕಾಲದ ಶಿವಾಲಯ ದರ್ಶನ ಅಲ್ಲಿರುವ ಗಣಪನ ಮೂರ್ತಿ ಕಳುವಾಗಿದೆ. ನನ್ನ ಹಿಂದಿನ ಬ್ಲಾಗ್ ನೋಡಿ. ಈಗಿರುವುದು ನಕಲಿ.
Labels:
ಅರಸೀಕೆರೆ,
ಗಣಪ,
ಪಾಳೆಗಾರರು.,
ಬೂದಿಹಾಳು,
ಮೇಟಿಕುರ್ಕೆ,
ಸಾಳುವ ನರಸಿಂಹ,
ಸಿರುಮನಾಯಕ
Saturday, August 29, 2009
ಬಿ ಎಂ ಟಿ ಸಿ ಬಸ್ಸಿನಲ್ಲಿ ಒಂದು ಸಂಜೆ.
ಬಿ ಎಮ್ ಟಿ ಸಿ ಬಸ್ಸಿನಲ್ಲಿ ಒಂದು ಸಂಜೆ.
ಪ್ರತಿ ದಿನ ನಾನು ಸಂಜೆ ಬಿ ಎಮ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುವುದು ಈಗ ಸಾಮಾನ್ಯವಾಗಿದೆ. ಈ ಪ್ರಯಾಣದ ಒಂದು ತುಣುಕು ನಿಮ್ಮ ಮಾಹಿತಿಗೆ. ನನ್ನ ಪ್ರಯಾಣ ಸಂಜೆ ೫.೩೦ ರಿಂದ ೬.೦೦ ಗಂಟೆಗೆ ಇಸ್ಕಾನ್ ಬಳಿ ಹತ್ತಿ ಚಂದ್ರಾ ಬಡಾವಣೆಗೆ ಹೋಗುವುದು.ಸಾಮಾನ್ಯವಾಗಿ ವಿಜಯನಗರದಲ್ಲಿ ಇಳಿದು ಇನ್ನೊಂದು ಬಸ್ ಹತ್ತಿ ಚಂದ್ರ ಬಡಾವಣೆಗೆ ತಲುಪುವುದು ನಡೆಯುತ್ತೆ. ಹೆಚ್ಚಾಗಿ ೪೦೧ ನಂಬರಿನ ಬಸ್ಸೆ ನನ್ನ ಗುರಿ. ಅಲ್ಲಿ ನಡೆಯುವುದನ್ನು ಹಾಗೆ ಬರೆಯುತ್ತಿದ್ದೇನೆ.
ಬಸ್ ಬಂತು . ಅಲ್ಲೆಲ್ಲೊ ನಿಲ್ಲಿಸ್ತಾ ಇದಾನೆ ಬನ್ನಿ ಓಡಿ. ಇಳಿಯೊರಿಗೆ ದಾರಿ ಬಿಡ್ರಿ. ಆಕಡೆ ಇಳಿರಿ. ಹೆಂಗಸರಿಗೆ ದಾರಿ ಬಿಡಿ. ಸದ್ಯ ಸೀಟ್ ಸಿಕ್ತಲ್ಲ. ನೀವು ಇಲ್ಲಿ ಬನ್ನಿ ಸಾರ್. ಯಾರ್ರಿ ರಾಜೆಶ್ವರಿನಗರ, ನಗರ. ಸಾರ್ ಮಾರ್ಕೆಟ್ ಹೋಗುತ್ತಾ. ರೀ ಮಾರ್ಕೆಟ್ ಹೋಗುತ್ತಾ. ಇಲ್ಲ ಇಲ್ಲ . ಜಿಂಕೆ ಮರಿನಾ. ಜಿಂಕೆಮರಿನಾ, ಹಲ್ಲೊ, ಹಲ್ಲೊ. ಎಸ್ಟು ಸಲ ಹೇಳ್ತಿನಿ ಫೋನ್ ಮಾಡ್ಬೇಡ ಅಂತ ಬರ್ತಾ ಇದೀನಿ ಇನ್ನೊಂದು ಹತ್ತು ನಿಮಿಷಾ. ರೀ ಸ್ವಲ್ಪ ಜಾಗ ಬಿಡ್ರಿ, ಟಿಕೆಟ್, ಟಿಕೆಟ್, ಪಾಸ್, ತೋರಿಸಿ. ಏನಲೆ ಮಗನೆ, ಎಷ್ಟು ಸಲ ಫೋನ್ ಮಾಡುದು, ಬರ್ತಾ ಇದೀನಿ ದುಡ್ಡು ಕೊಟ್ರೆ ಸರಿ ಇಲ್ಲದಿದ್ದ್ರೆ ಹೊಗೆ ಹಾಕ್ಸಿ ಬಿಡ್ತಿನಿ ಮಗನೆ.ಯಾರ್ರಿ ನವ್ರಂಗ್ ಇಳಿರಿ ಬೇಗ, ಮುಂದೆ ಹತ್ತಮ್ಮ, ಎಲ್ಲಿ ದುಡ್ಡು ತೆಗಿರಿ, ಅಣ್ಣ ಒಂದು ಟಿಕೆಟ್ ನಾಗರಬಾವಿ, ಇಳಿಯಮ್ಮ ಇದು ಹೋಗುಲ್ಲ ಕೇಳುಲ್ಲ ಮಾಡುಲ್ಲ ಹತ್ತಿ ನಮ್ಮ ಪ್ರಾಣ ತೆಗಿತಾರೆ ಇಳಿ ಮುಂದಿನ ಸ್ಟಾಪ್ನಲ್ಲಿ. ರಿ ಕಂಡಕ್ಟ್ರೆ ಒಂದು ಟೋಲ್ ಗೇಟ್, ಬಂದೆ ಚಿಲ್ಲರೆ ಕೊಡಿ ಒಂದು ರೂಪಾಯಿ.ಯಾ ದಟ್ ಪ್ರಾಜೆಕ್ಟ್ ಮ್ಯಾನೇಜರ್ ನನ್ಮಗ ಇವತ್ತು ಕೊಟ್ಟಿದಿನಿ ಸರಿಯಾಗಿ. ಬಂತ ಸಾರ್ ಇವತ್ತು ನಂದು ಪಾರ್ಟ್ ಪೇ ಮೆಂಟ್, ಇಲ್ಲ ಫ಼ೈಲ್ ಹಾಗೆ ಇಟ್ಟಿದಾರೆ ಬಾಸ್, ನಾಳೆ ಲಾಸ್ಟ್. ರಿ ಕಾಲ್ ಮೇಲೆ ತೆಗಿರಿ, ಕಾಣುಲ್ವ ಕಣ್ಣು. ಟೋಲ್ ಗೇಟ್ ಇಳಿರಿ. ಮೇಲೆ ಹೋಗುಲ್ಲ ಕೆಳ್ಗೆ ಇಳಿರಿ ಇಳಿರಿ. ಸ್ವಲ್ಪ ಎಫ಼್ ಎಮ್ ಹಾಕ್ರಿ. ಕಟ್ ಕಟ್ ಡಗ್ ಡಗ್ , ಪ್ಯಮ್ ಪ್ಯಮ್ ಪ್ಯಮ್. ವಿಜಯನಗರ ,ವಿಜಯನಗರ.

Monday, August 24, 2009
Sunday, August 2, 2009
Wednesday, July 29, 2009
Sunday, July 26, 2009
Subscribe to:
Posts (Atom)