ಬೆಂಗಳೂರಿನಿಂದ ೧೫೦ ಕಿ ಮೀ ದೂರದ ಬೋರನಕಣಿವೆ ಬಹಳ ಜನರಿಗೆ ಗೊತ್ತಿಲ್ಲ ಅಂತ ಕಾಣುತ್ತೆ. ಸಿರಾ ಹುಳಿಯಾರ್ ರಸ್ತೆಯಲ್ಲಿ ಸುಮಾರು ಸಿರಾದಿಂದ ೩೫ ಕಿ ಮೀ ದೂರದಲ್ಲಿ ದೇ. ಸಿರಾವರೆಗೂ ಹೆದ್ದಾರಿ ಅಲ್ಲಿಂದ ಸಾಕಷ್ಟು ಹಾಳಾದ ರಸ್ತೆ. ಬೋರನ ಕಣಿವೆ ಒಂದು ಮುದ್ದಾದ ಪುಟ್ಟ ಅಣೆಕಟ್ಟೆ. ಎರಡು ಗುಡ್ಡಗಳನ್ನು ತಾಟು ಹಾಕಿದ್ದಾರೆ. ೧೮೯೨ ರಲ್ಲಿ ಪೂರ್ಣಗೊಂಡ ಈ ಕಟ್ಟೆ ೨೫ ವರ್ಷಗಳಲ್ಲಿ ಮೊದಲ ಬಾರಿಗೆ ತುಂಬಿದೆ. ಹತ್ತಿರದಲ್ಲೇ ವಿಧ್ಯುತ್ ಉತ್ಪಾದಿಸುವ ಗಾಳಿ ರಾಟೆಗಳು ಕಾಣ ಸಿಗುತ್ತವೆ. ಅಲ್ಲಿ ಊಟ ತಿಂಡಿ ಏನು ಸಿಗೋಲ್ಲ. ಎಲ್ಲ ನಾವೇ ಕೊಂಡೊಯ್ಯ ಬೇಕು. ಇನ್ನು ಹಾಳಾಗದ ಪರಿಸರ.