Friday, December 11, 2009

doddaballapura.

 




ಬಹಳ ದಿನಗಳ ನಂತರ ಮತ್ತೆ ಒಂದು ಚಿಕ್ಕ ಪ್ರವಾಸ ದೊರಕಿತು. ಮಿತ್ರರಾದ ಗಣೇಶ ರಾವ್ ಜೊತೆ doDDabaLLaapurakke ಹೋಗಿದ್ದೆ.  ಒಂದೆರಡು ಗಂಟೆ ಸಮಯವಿತ್ತು. ವಿಪರೀತ ಸೆಖೆ ಇತ್ತು. ಹಾಗೆ ಸುತ್ತಾಡಿ ಬರಲು ಹೊರಟೆ, ಎಲ್ಲಾ ಚಿಕ್ಕ ಚಿಕ್ಕ ಗಲ್ಲಿಗಳಂತ  ರಸ್ತೆಗಳು ಎಲ್ಲ ಸಿಮೆಂಟ್ ರಸ್ತೆಗಳು. ಎರಡು ಬದಿ ತೆರೆದ ಚರಂಡಿಗಳು. ಸ್ವಲ್ಪ ಜಾಸ್ತಿಯೇ ಅನ್ನುವಂತಹ ಕೊಳಚೆ. ಒಂದೇ ಸಮ ಬರುವ ಮಗ್ಗಗಳ ಶಬ್ದ. ರಾತ್ರಿಯೆಲ್ಲ  ಹೀಗೆ ಇದ್ದರೆ ಇರುವುದಾದರೂ ಹೇಗೆ ಎಂಬ ಅನುಮಾನ ಕಾಡಿತು. ಅಲ್ಲಿಯೇ ಹತ್ತಿರ ಇದ್ದ  ವೆಂಕಟರಮಣ  ಸ್ವಾಮಿ ದೇವಾಲಯಕ್ಕೆ ಹೋದೆ. ಅಷ್ಟೇನೂ ಪುರಾತನವಲ್ಲದ ದೇವಾಲಯ. ಸುತ್ತ ಜಾಲಂದ್ರಗಳು. ಗೋಡೆಯ ಮೇಲೆ ಅಲ್ಲೊಂದು ಇಲ್ಲೊಂದು ಉಬ್ಬುಶಿಲ್ಪಗಳು. ಮೇಲೆ ದಶಾವತಾರದ ಶಿಲ್ಪಗಳು. ಅಲ್ಲೇ ಪಕ್ಕದಲ್ಲಿ  ಶಂಕರ ಮಠ ಇದೆ. ಗಲ್ಲಿಯೊಂದರಲ್ಲಿ ರಾಯರ ಮಠ ಕೂಡ ಇದೆ. ಊರ ಹೊರಗೆ ಒಂದು ಹಾಳು ಬಿದ್ದ ಚಿಕ್ಕ ದೇವಾಲಯ ಇದೆ. ಬೀಗ ಹಾಕಿದ್ದರಿಂದ ಒಳಗೆ ಹೋಗಲಿಲ್ಲ. 
ಆದರೇ ದೊಡ್ಡ ಬಳ್ಳಾಪುರ ಸ್ವಲ್ಪ ನಿರಾಸೆಯೇ ಆಯಿತು.