Tuesday, October 13, 2009

ಬೂದಿಹಾಳು ಪಾಳೆಯಪಟ್ಟಿನ ನೆನಪು.






ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಕಳೆದ ಭಾನುವಾರ ಬೂದಿಹಾಳಿಗೆ ಭೇಟಿ ನೀಡಿದೆ. ೧೫ ನೆ ಶತಮಾನದಲ್ಲಿ ಆಳಿದ ಕಾಚನಾಯಕನ ವಂಶದ ಸಿರುಮನಾಯಕನ ಪಾಳೆಯ ಅದಾಗಿತ್ತು. ಆ ಪಾಳೆಯಪಟ್ಟನ್ನು ವಿಜಯನಗರದ ನಂತರದ ಪ್ರಬಲ ರಾಜನೆಂದು ಗುರುತಿಸಿದ್ದರು. ಸಾಳುವ ನರಸಿಂಹನೊಡನೆ ಹೋರಾಡಿ ವೀರ ಮರಣ ಹೊಂದಿದ ಸಿರುಮನಾಯಕನ ಬಗ್ಗೆ ೩ ಸಾಂಗತ್ಯ ಕಾವ್ಯಗಳಿರುವುದೇ ಸಾಕ್ಷಿ. ಹೆಸರೇ ಹೇಳುವಂತೆ ಈಗ ಅದು ಬೂದಿಹಾಳು.ಈಗಿನ ಹೆಸರು ಶ್ರೀರಾಮಪುರ. ಹೊಸದುರಗ ತಾಲೂಕು. ವೀರಭದ್ರನ ಗುಡಿ ಒಂದಿದೆ. ಹತ್ತಿರ ಇರುವ ಹೆಗ್ಗೆರೆ ಗೆ ಹೋಗಲಿಲ್ಲ. ಇದು ಜೈನರ ಯಾತ್ರಾಸ್ಥಳ.ಅಲ್ಲಿಂದ ೩ ಕಿ ಮೀ ದೂರದ ಗವಿರಂಗನಾಥ ನ ಬೆಟ್ಟ ನೋಡಿದ್ದಾಯಿತು.ಅಲ್ಲಿಂದ ನಮ್ಮೂರು ಮೇಟಿಕುರ್ಕೆಗೆ ಭೇಟಿ ನೀಡಿ ಅರಸೀಕೆರೆ ಯಲ್ಲಿ ಹೊಯ್ಸಳರ ಕಾಲದ ಶಿವಾಲಯ ದರ್ಶನ ಅಲ್ಲಿರುವ ಗಣಪನ ಮೂರ್ತಿ ಕಳುವಾಗಿದೆ. ನನ್ನ ಹಿಂದಿನ ಬ್ಲಾಗ್ ನೋಡಿ. ಈಗಿರುವುದು ನಕಲಿ.