ಬಿ ಎಮ್ ಟಿ ಸಿ ಬಸ್ಸಿನಲ್ಲಿ ಒಂದು ಸಂಜೆ.
ಪ್ರತಿ ದಿನ ನಾನು ಸಂಜೆ ಬಿ ಎಮ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುವುದು ಈಗ ಸಾಮಾನ್ಯವಾಗಿದೆ. ಈ ಪ್ರಯಾಣದ ಒಂದು ತುಣುಕು ನಿಮ್ಮ ಮಾಹಿತಿಗೆ. ನನ್ನ ಪ್ರಯಾಣ ಸಂಜೆ ೫.೩೦ ರಿಂದ ೬.೦೦ ಗಂಟೆಗೆ ಇಸ್ಕಾನ್ ಬಳಿ ಹತ್ತಿ ಚಂದ್ರಾ ಬಡಾವಣೆಗೆ ಹೋಗುವುದು.ಸಾಮಾನ್ಯವಾಗಿ ವಿಜಯನಗರದಲ್ಲಿ ಇಳಿದು ಇನ್ನೊಂದು ಬಸ್ ಹತ್ತಿ ಚಂದ್ರ ಬಡಾವಣೆಗೆ ತಲುಪುವುದು ನಡೆಯುತ್ತೆ. ಹೆಚ್ಚಾಗಿ ೪೦೧ ನಂಬರಿನ ಬಸ್ಸೆ ನನ್ನ ಗುರಿ. ಅಲ್ಲಿ ನಡೆಯುವುದನ್ನು ಹಾಗೆ ಬರೆಯುತ್ತಿದ್ದೇನೆ.
ಬಸ್ ಬಂತು . ಅಲ್ಲೆಲ್ಲೊ ನಿಲ್ಲಿಸ್ತಾ ಇದಾನೆ ಬನ್ನಿ ಓಡಿ. ಇಳಿಯೊರಿಗೆ ದಾರಿ ಬಿಡ್ರಿ. ಆಕಡೆ ಇಳಿರಿ. ಹೆಂಗಸರಿಗೆ ದಾರಿ ಬಿಡಿ. ಸದ್ಯ ಸೀಟ್ ಸಿಕ್ತಲ್ಲ. ನೀವು ಇಲ್ಲಿ ಬನ್ನಿ ಸಾರ್. ಯಾರ್ರಿ ರಾಜೆಶ್ವರಿನಗರ, ನಗರ. ಸಾರ್ ಮಾರ್ಕೆಟ್ ಹೋಗುತ್ತಾ. ರೀ ಮಾರ್ಕೆಟ್ ಹೋಗುತ್ತಾ. ಇಲ್ಲ ಇಲ್ಲ . ಜಿಂಕೆ ಮರಿನಾ. ಜಿಂಕೆಮರಿನಾ, ಹಲ್ಲೊ, ಹಲ್ಲೊ. ಎಸ್ಟು ಸಲ ಹೇಳ್ತಿನಿ ಫೋನ್ ಮಾಡ್ಬೇಡ ಅಂತ ಬರ್ತಾ ಇದೀನಿ ಇನ್ನೊಂದು ಹತ್ತು ನಿಮಿಷಾ. ರೀ ಸ್ವಲ್ಪ ಜಾಗ ಬಿಡ್ರಿ, ಟಿಕೆಟ್, ಟಿಕೆಟ್, ಪಾಸ್, ತೋರಿಸಿ. ಏನಲೆ ಮಗನೆ, ಎಷ್ಟು ಸಲ ಫೋನ್ ಮಾಡುದು, ಬರ್ತಾ ಇದೀನಿ ದುಡ್ಡು ಕೊಟ್ರೆ ಸರಿ ಇಲ್ಲದಿದ್ದ್ರೆ ಹೊಗೆ ಹಾಕ್ಸಿ ಬಿಡ್ತಿನಿ ಮಗನೆ.ಯಾರ್ರಿ ನವ್ರಂಗ್ ಇಳಿರಿ ಬೇಗ, ಮುಂದೆ ಹತ್ತಮ್ಮ, ಎಲ್ಲಿ ದುಡ್ಡು ತೆಗಿರಿ, ಅಣ್ಣ ಒಂದು ಟಿಕೆಟ್ ನಾಗರಬಾವಿ, ಇಳಿಯಮ್ಮ ಇದು ಹೋಗುಲ್ಲ ಕೇಳುಲ್ಲ ಮಾಡುಲ್ಲ ಹತ್ತಿ ನಮ್ಮ ಪ್ರಾಣ ತೆಗಿತಾರೆ ಇಳಿ ಮುಂದಿನ ಸ್ಟಾಪ್ನಲ್ಲಿ. ರಿ ಕಂಡಕ್ಟ್ರೆ ಒಂದು ಟೋಲ್ ಗೇಟ್, ಬಂದೆ ಚಿಲ್ಲರೆ ಕೊಡಿ ಒಂದು ರೂಪಾಯಿ.ಯಾ ದಟ್ ಪ್ರಾಜೆಕ್ಟ್ ಮ್ಯಾನೇಜರ್ ನನ್ಮಗ ಇವತ್ತು ಕೊಟ್ಟಿದಿನಿ ಸರಿಯಾಗಿ. ಬಂತ ಸಾರ್ ಇವತ್ತು ನಂದು ಪಾರ್ಟ್ ಪೇ ಮೆಂಟ್, ಇಲ್ಲ ಫ಼ೈಲ್ ಹಾಗೆ ಇಟ್ಟಿದಾರೆ ಬಾಸ್, ನಾಳೆ ಲಾಸ್ಟ್. ರಿ ಕಾಲ್ ಮೇಲೆ ತೆಗಿರಿ, ಕಾಣುಲ್ವ ಕಣ್ಣು. ಟೋಲ್ ಗೇಟ್ ಇಳಿರಿ. ಮೇಲೆ ಹೋಗುಲ್ಲ ಕೆಳ್ಗೆ ಇಳಿರಿ ಇಳಿರಿ. ಸ್ವಲ್ಪ ಎಫ಼್ ಎಮ್ ಹಾಕ್ರಿ. ಕಟ್ ಕಟ್ ಡಗ್ ಡಗ್ , ಪ್ಯಮ್ ಪ್ಯಮ್ ಪ್ಯಮ್. ವಿಜಯನಗರ ,ವಿಜಯನಗರ.